Thank you for visiting...

Saturday, September 27, 2008

ಕಥೆಯೊಂದು ವ್ಯಥೆಯಾಗಿ...

ಅಂದು ಭಾನುವಾರ ಮಧ್ಯಾಹ್ನ. ಆರ್ಕುಟಿನಲ್ಲಿ ಅವರಿವರ ಸ್ಕ್ರಾಪ್ ನೋಡುತ್ತಾ ನನ್ನ ಟೈಮ್ ಸ್ಕ್ರಾಪು ಮಾಡುತ್ತಿದ್ದೆ. ಹೊರಗಡೆ ಎನೋ ಗಡು-ಗುಡು ಸದ್ದಾಯಿತು ಅಪಾರ್ಟ್‍ಮೆಂಟೇ ಅಲ್ಲಾಡುವಷ್ಟು. ಹೇಳದೆ ಕೇಳದೆ ಟೊರ್ನಾಡೊ ಎನಾದ್ರೂ ಬಂತೇನೋ ಅಂದು ಕೊಳ್ಳುವಷ್ಟರಲ್ಲಿ ಆ ಸದ್ದು ಬಂದು ನನ್ನ ಮನೆ ಬಾಗಿಲ ಮುಂದೆ ನಿಂತಂತೆ. ಗಾಬರಿಯಿಂದ ಹೋಗಿ ಬಾಗಿಲು ತೆರೆದೆ.

ಎಳೆಂಟು ಜನರ ಗುಂಪು. ನಮ್ಮೂರಿನ ಇಂಡಿಯನ್ ಕಮ್ಯೂನಿಟಿಯ ಮಹಿಳಾಮಣಿಗಳೆಲ್ಲಾ ಕೈ ಹಿಂದಕ್ಕೆ ಇಟ್ಟುಕೊಂಡು ನಿಂತಿದ್ದಾರೆ. ಕೈನಲ್ಲೇನೋ ಇದೆ. ನನಗೆ ಆಶ್ಚರ್ಯ.. ಇವರೆಲ್ಲಾ ಯಾಕೆ ಇಲ್ಲಿ...? ಅಷ್ಟರಲ್ಲಿ ಗುಂಪಿನ ಕೊನೆಯಲ್ಲಿಬ್ಬರು ಬ್ಲಾಗು...ಮೈಕ್ರೊ ಕತೆ...ಅಂತ ಮಾತಾಡುತ್ತಿದ್ದುದು ಕೇಳಿಸಿತು.. ಓಹ್.. ಈಗ ಅರ್ಥವಾಯಿತು..ಇತ್ತೀಚೆಗೆ ಬ್ಲಾಗಿನಲ್ಲಿ ಕೆಲವು ಕತೆ, ಕವಿತೆಗಳನ್ನು ಬರೆದು ಸ್ವಲ್ಪ ಫೇಮಸ್(?) ಆಗಿದ್ನಲ್ಲ.... ಬಹುಶಃ ಇವರೆಲ್ಲಾ ನನ್ನ ಅಭಿಮಾನಿಗಳು. ಅಭಿನಂದಿಸಲು ಹಾರ ತುರಾಯಿ (ಹಿಂದಕ್ಕೆ ಇಟ್ಕೊಂಡಿರೊ ಕೈನಲ್ಲಿ) ತಂದಿರಬಹುದೆಂದು ಊಹಿಸಿ...ಬನ್ನಿ ಬನ್ನಿ ಒಳಗೆ ಎಂದು ಕರೆದೆ. ಬಂದರು ಒಳಗೆ. ಆದರೆ ಕೂರಲಿಲ್ಲ. ನನ್ನ ಸುತ್ತುವರೆದು ನಿಂತು.."ಎನೋ.. ದೊಡ್ಡ ರೈಟರಾ ನೀನು..? ಕಥೆ ಬರಿತಿಯಾ...? ಮಾನ ಹರಾಜು ಮಾಡಲು ನಮ್ಮ ಕಥೆನೆ ಬರಿಬೇಕಾ..?" ಅಂದಾಗ ನನ್ನ ಹಣೆ ಸಣ್ಣಗೆ ಬೆವರ ತೊಡಗಿತು. "ಮಾನ ಹರಾಜಾ..? ನಾನ...." ಅಂತ ತೊದಲುವಷ್ಟರಲ್ಲಿ..ಇನ್ನೊಬ್ಬರು...ಮೊದಲು ನಿನ್ನ ಆ "ಮಳೆ ನಿಂತು ಹೋದ ಮೇಲೆ..." ಕಥೆಯನ್ನು ಬ್ಲಾಗಿಂದ ತೆಗೆದು ಹಾಕಿ ಕ್ಷಮೆ ಕೇಳು ಅಂದಾಗ ನನಗರ್ಥವಾಗಿತ್ತು ಇವರೆಲ್ಲಾ ಆ ಕಥೆ ಓದಿ ಕುಂಬಳಕಾಯಿ ಕಳ್ಳನ ಹಾಗೆ ಹೆಗಲು ಮುಟ್ಕೊಂಡಿರೋವ್ರು ಅಂತ. ನಾನು ಸ್ವಲ್ಪ ಧೈರ್ಯ ತಂದುಕೊಂಡು... "ಅದು ನಿಮ್ಮ ಕಥೆ ಅಲ್ಲ. ಬಾಗಿನಲ್ಲಿ ಎನನ್ನೂ ಬರೆಯೊ ಹಕ್ಕಿದೆ...." ಎಂದೆನೋ ಹೇಳುತ್ತಿದ್ದೆ. ಅಷ್ಟರಲ್ಲಿ ಹಿಂದಿನಿಂದ ಯಾರೋ ಜುಟ್ಟು ಹಿಡಿದು.. ತಲೆ ಮೇಲೆ ಸೌಟಲ್ಲಿ ಟಣ್ ಅಂತ ಹೊಡೆದದ್ದಷ್ಟೇ ನೆನಪು. ಆಮೇಲೆ ಕಣ್ಣು ಕತ್ತಲೆ ಕವಿದಂತಾಗಿ ಸುತ್ತಲೂ ಕತ್ತಲೆ.

ಎದ್ದು ಕುಳಿತೆ. ಸುತ್ತಲೂ ಕತ್ತಲೆ... ತಲೆ ಮುಟ್ಟಿ ನೋಡಿದೆ. ಟಣ್ ಆದ ಜಾಗದಲ್ಲಿ ಎನೂ ಆಗಿರಲಿಲ್ಲ. ಸದ್ಯ...ಇದು ಬರೀ ಕನಸೆಂದುಕೊಂಡು ಎದ್ದು ಟೈಮ್ ನೋಡಿದೆ. ಬೆಳಗಿನ ಜಾವ ಐದೂವರೆ.!! ಅಸಲಿ ಸಮಸ್ಯೆ ಸುರುವಾದದ್ದೇ ಇಲ್ಲಿಂದ.

ಈಗೀಗ, "ಬೆಳಗಿನ ಜಾವ ಬಿದ್ದ ಕನಸು ನಿಜ ಆಗುತ್ತಾ...?" ಅನ್ನೋ ಯೋಚನೆ ಬಂದಾಗಲೆಲ್ಲಾ... ’ಟಣ್’ ಆದ ಜಾಗದಲ್ಲಿ ಸಣ್ಣದೊಂದು ನೋವು ಕಾಣಿಸಿಕೊಳ್ಳುತ್ತಿದೆ.


=======================================

ದಿನಾಂಕ 30 ಸೆಪ್ಟಂಬರ್ 2008 ರಂದು ಸಂಜೆ 5:38ರ ಗೋಧೋಳಿಯ ಶುಭ ಮುಹೂರ್ತದಲ್ಲಿ ಮೇಲಿನ ಕನಸು ನನಸಾಗಿದೆ ಎಂದು ತಿಳಿಸಲು ವಿಷಾದಿಸುತ್ತೆನೆ.

9 comments:

ಶಾಂತಲಾ ಭಂಡಿ (ಸನ್ನಿಧಿ) said...

urbhat ಅವರೆ...
ಆ ಗುಂಪಿನಲ್ಲಿ ನಾನು ಇರ್ಲಿಲ್ಲ ತಾನೆ? :-)
ಬೆಳ್ ಬೆಳಿಗ್ಗೆ ನಗ್ತಿದೀನಿ ಜೋರಾಗಿ. ತುಂಬ ಚೆನ್ನಾಗಿ ಬರ್ದಿದೀರ
:-) :-)

sunaath said...

ನೀವು ಕಂಡ ಕನಸೆಲ್ಲ ನನಸಾಗಲಿ ಅಂತ ಹಾರೈಸುತ್ತೇನೆ.

Anonymous said...

"maLe nintu hOda mELe" kathena odiddagale andukondidde.. ivanige kaadide grahachara antha...:)
chennagide ninage vyateyaada kathe..

urbhat [Raj] said...

ಶಾಂತಲರವರೇ,
ಸುತ್ತುವರೆದು, ನನ್ನ ಮುಂದೆ ನಿಂತವರಲ್ಲಿ ಎಲ್ಲರನ್ನೂ ಗಮನಿಸಿದ್ದೇನೆ. ಅಲ್ಲಿ ನೀವು ಇರಲಿಲ್ಲ.
ಆದರೆ ಹಿಂಬದಿಯಿಂದ ಸೌಟು ಹಿಡಿದು ಟಣ್ ಅನ್ನಿಸಿದವರ್ಯಾರೆಂದು ಗೊತ್ತಿಲ್ಲ...
ಸೌಟು..ಅಂದ ಮೇಲೆ ಅಡುಗೆಯಲ್ಲಿ ಪಳಗಿದ ಕೈಯವರೇ ಇರಬಹುದು.. ಅಂದ ಹಾಗೆ ನೀವು ಈ-ಟಿವಿನಲ್ಲಿ ಅಡುಗೆ ಪ್ರೋಗ್ರಾಮ್ ಕೊಟ್ಟಿದ್ರಲ್ವ..?

ಓದಿ, ಜೋರಾಗಿ ಮುಗುಳ್ನಗಾಡಿ, ಕಾಮೆಂಟಿಸಿದಕ್ಕೆ ಧನ್ಯವಾದಗಳು.


ಸುನಾಥರವರೇ,
ನನಸಾಗಲೆಂದೇ ಕಂಡಿರುವ ಬಹಳಷ್ಟು ಕನಸುಗಳು ಇನ್ನೂ ವೈಟಿಂಗ್ ಲಿಷ್ಟಿನಲ್ಲಿ..ಕಾಯುತ್ತಿರುವಾಗ.. ಈ ಕನಸು...... ಬೇಡ ಬಿಡಿ.

ಓದಿ ಕಾಮೆಂಟಿಸಿದಕ್ಕೆ ಧನ್ಯವಾದಗಳು.


ಪ್ರದೀಪ್,
ಸುಮ್‍ಸುಮ್ನೆ ಹೆದ್ರಿಸ್ಬೇಡ.. ಈಗ ಎನಾದ್ರೂ ಪರಿಹಾರ ಇದೆಯಾ....? ಇದ್ದರೆ ತಿಳಿಸು.

Ravikiran Gopalakrishna said...

Rajanna, naanu nimage hege haaraisabekendu artha aagtha illa. nimma kanasugalella nanasaagali antha haaraisidre aa "TUN" saddu nijavaadre..?! :) chennagide... chennagide..

Gubbacchi said...

:))

urbhat [Raj] said...

@ ravikiran,

dhaaraalavaagi harasi.. ee kanasu aagana nanasaagide. innu bhayavilaa..:)

@ gubbhacchi

Thanks...for 'Chinv'

Anonymous said...

yenri bhatre...u not only dream but also u have exact image of the situation in the dream...nice to see the image of ur dream..:-)

ತೇಜಸ್ವಿನಿ ಹೆಗಡೆ said...

ನಿಮ್ಮ ಮಳೆನಿಂತು ಹೋದಮೇಲೆ ಮೊದಲೇ ಓದಿದ್ದೆ. ತುಂಬಾ ಇಷ್ಟವಾಗಿತ್ತು. ಅದಕ್ಕಿಂತಲೂ ಸುಂದರವಾಗಿದೆ ನಿಮ್ಮ ಈ ಕನಸು :)