Thank you for visiting...

Monday, August 4, 2008

ಮೈಕ್ರೊ ಕಥೆಗಳು -

1. ಮಳೆ ನಿಂತು ಹೋದ ಮೇಲೆ...

ದಾಂಪತ್ಯದ ಮೊದಲ ದಿನಗಳವು. ಅವನು, ಆಫೀಸಿಗೆ ಹೊರಡಲು ರೆಡಿಯಾಗುತ್ತಿದ್ದಾನಷ್ಟೆ. ಅವಳು, ಬೇಗನೆ ಎದ್ದು ತಯಾರಿಸಿದ ಬಿಸಿಬಿಸಿ ಉಪಾಹಾರದೊಂದಿಗೆ ಡೈನಿಂಗ್ ಟೇಬಲಿನಲ್ಲಿ ಅವನಿಗಾಗಿ ಕಾಯುತ್ತಿದ್ದಾಳೆ.
3-4 ತಿಂಗಳುಗಳ ಬಳಿಕ, ಅವನು ಆಗಲೇ ರೆಡಿಯಾಗಿದ್ದು ತಿಂಡಿಗಾಗಿ ಕಾಯುತ್ತಿದ್ದಾನೆ. ಆದರೆ ಅವಳಿನ್ನೂ ಕಿಚನಿನಲ್ಲಿ ಬ್ಯುಸಿಯಾಗಿದ್ದಾಳೆ. ಕೆಲವೊಮ್ಮೆ ಅವಳು ತೀರಾ ಬ್ಯುಸಿ(ಬಿಸಿ)ಯಾದಾಗ ಅವನು ಬ್ರೆಡ್‍ಜ್ಯಾಮ್ ಇಲ್ಲವೆ ಕಾರ್ನ್‍ಫ್ಲೇಕ್ಸ್‍ಗೇ ಶರಣಾಗಿದ್ದಾನೆ.
6-7 ತಿಂಗಳ ಬಳಿಕ, ಅವನು ತಾನೇ ರೆಡಿ ಮಾಡಿಕೊಂಡ ತಣ್ಣಗಿನ ಸೀರಿಯಲನ್ನು ತಿನ್ನುವಾಗ, ಅವಳು ಮಲಗಿದಲ್ಲೇ ಮುಸುಕು ಸರಿಸಿ ಹೇಳುತ್ತಾಳೆ "ನೀವು ಮಾಡುವ ತಟ್ಟೆ ಚಮಚದ ಸದ್ದಿಗೆ ನನಗೆ ಎಚ್ಚರವಾಗಿ ನಿದ್ರಾ ಭಂಗವಾಗುತ್ತಿದೆ...ಸದ್ದು ಮಾಡದೆ ತಿಂದು ಹೊರಡಿ."

------------------------------------------------------------

2. ತನ್ನದಲ್ಲದ ಹಾದಿಯಲ್ಲಿ...

ಕೈ ತುಂಬಾ ಸಂಬಳದ ಹೊಸ ಕೆಲಸಕ್ಕೆ ಸೇರಿದ ಅವನ ಉತ್ಸಾಹ ತುಂಬಾ ದಿನ ಉಳಿಯಲಿಲ್ಲ. ಕೈ ತುಂಬಾ ಸಂಬಳದ ಜೊತೆಗೆ ಬಂತು ಮೈ ತುಂಬಾ ಕೆಲಸ, ಟಾರ್ಗೆಟ್, ಡೆಡ್‍ಲೈನು, ಡೆಲಿವೆರಿ, ಮೀಟಿಂಗು, ಪರ್ಫಾರ್ಮೇನ್ಸ್ ರೇಟಿಂಗು...ಊಫ್....

ಅವನೀಗ ಆಸ್ಪತ್ರೆಯ ಬೆಡ್ಡಿನಲ್ಲಿದಾನೆ.
ಅವನಿಗೆ ಕೆಲಸದ ಒತ್ತಡದಿಂದ ರಕ್ತದ ಒತ್ತಡ ಜಾಸ್ತಿಯಾಗಿ ಸ್ಟ್ರೋಕ್ ಹೊಡೆದಿದೆ. ದೇಹದ ಏಡಭಾಗದಲ್ಲಿ ಸ್ವಾದೀನವಿಲ್ಲ. ಈಗ ಎಡಗೈಯ ರಿಪೇರಿಗೆ ಬಲಗೈನಲ್ಲಿ ಪಡೆದ ’ಕೈ ತುಂಬಾ’ ಸಂಬಳ ಸೋರಿಹೋಗಿದೆ.

ಅವನ ಮನದಾಳದಲ್ಲಿ ನೋವು ತುಂಬಿದ ಪ್ರಶ್ನೆಯೊಂದು ಕಾಡುತ್ತಿದೆ....."ಈಸ್ ಇಟ್ ವರ್ಥ್..?"

-------------------------------------------------------------

3. ಬುದ್ದ ಹೇಳಿದ್ದು...

ಬುದ್ದನ ಕುರಿತಾದ ಸಾಕಷ್ಟು ಪುಸ್ತಕಗಳನ್ನು ಓದಿ ತಲೆಕೆಡಿಸಿಕೊಂಡು ನಿದ್ರೆ ಹೋಗಿದ್ದ ಅವನು ಅಂದು ಮದ್ಯರಾತ್ರಿಯಲ್ಲಿ ದಿಡೀರನೆ ಎದ್ದು ಕುಳಿತ...ಬುದ್ದನಂತಾಗಬೇಕೆಂಬ ’ಆಸೆ’ಯಿಂದ.
ಆದರೆ ’ಆಸೆಯೇ ದು‍ಃಖಕ್ಕೆ ಮೂಲ’ ಎಂದು ಪುಸ್ತಕದಲ್ಲಿ ಬುದ್ದ ಹೇಳಿದ್ದು ನೆನಪಾಗಿ, ಹೊದ್ದು ಮಲಗಿದ್ದ ಮರುಕ್ಷಣದಲ್ಲಿ.

(ಇದು ಮಾತ್ರ ಯಾವಾಗಲೋ ಓದಿದ್ದ ಹನಿಗವನವೊಂದರ ರೂಪಾಂತರ)

15 comments:

Anonymous said...

Hi Raj, Super story.. chennagide..
"tannadallada haadiyalli" is serious thought for young generation. good.

Anjana said...

tumba chennagidave micro kathegaLu Bhatre...first and last are very funny.

VENU VINOD said...

ಭಟ್ರೆ, ಮೊದಲ ಮತ್ತು ಎರಡನೆ ಕಥೆಗಳು ಮನಮುಟ್ಟಿದವು. ಬಹುಷಃ ಹೊಸ ಮಾದರಿಯ ಬದುಕಿನ ಶೈಲಿ ಇಂತಹ ಅನರ್ಥಗಳನ್ನೆಲ್ಲ ಸೃಷ್ಟಿಸುತ್ತಿದೆ ಅನಿಸುತ್ತೆ....
-ವೇಣು.

Anonymous said...

Bhatre...yaridri idu first kathe...yaardo real life kathe copy maadiro haagide??

urbhat [Raj] said...

ಪ್ರದೀಪ್,
ಪ್ರತಿಕ್ರಿಯೆಗೆ ಧನ್ಯವಾದಗಳು.
ಹೌದು..ಕೇವಲ ಸಮಾಜದಲ್ಲಿನ ಗೊಳ್ಳು ಪ್ರತಿಷ್ಟೆಗಾಗಿ ತಮ್ಮ ಸ್ವ-ಆಸಕ್ತಿ, ಮತ್ತು ಟ್ಯಾಲೆಂಟನ್ನು ಗುರುತಿಸದೆ ಹಣ ಮತ್ತು ಅಧಿಕಾರದ ಬೆನ್ನತ್ತಿ "ತನ್ನದಲ್ಲದ ಹಾದಿಯಲ್ಲಿ" ನಡೆದು ಕೊನೆಗೆ ಬದುಕನ್ನೇ ಬಲಿಕೊಟ್ಟ ಕಥೆಯದು.

ಅಂಜನಾ,
ಬ್ಲಾಗನ್ನು ಓದುವ ನಿಮ್ಮ ಆಸಕ್ತಿ ಮತ್ತು ಪ್ರತಿಕ್ರಿಯೆಗಳೆರಡಕ್ಕೂ ನನ್ನ ಧನ್ಯವಾದಗಳು.


ವೇಣು,
ಓದಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆ ಅಕ್ಷರಃ ನಿಜ.

ಸುಮಾ,
ಕುಂಬಳಕಾಯಿ ಕಳ್ಳ ಅಂದ್ರೆ... ಯಾರೋ ಹೆಗ್ಲು ಮುಟ್ಕೊಂಡ್ರಂತೆ ಗೊತ್ತಾ..?
ಅಂತು ನಿಮ್ ಕತೆನೂ ಹೀಗೆ ಇದೆ ಅಂತ ಆಯ್ತು...ಬೇಜಾರು ಮಾಡ್ಕೊಬೇಡಿ..ಅದು ನಿಮ್ ಕಥೆ ಅಲ್ಲ.
ಆದ್ರೂ ಸೇಫ್ಟಿಗೆ ಅಂತ "ಈ ಕಥೆನಲ್ಲಿ ಬರೋ ಎಲ್ಲಾ ಪಾತ್ರಗಳು ಕಾಲ್ಪನಿಕ....." ಅಂತ ಸೇರಿಸಿ ಬಿಡ್ತೆನೆ. ಓಕೆನಾ..?

Anonymous said...

Buddha heliddu chennagide..

sunaath said...

ಮೈಕ್ರೊ ಕತೆಗಳು ಚೆನ್ನಾಗಿವೆ. ಒಂದು ಕ್ಷಣದಲ್ಲಿ ಒಂದು ದೊಡ್ಡ ಚಿತ್ರವನ್ನೇ ತೋರಿಸುತ್ತವೆ.

urbhat [Raj] said...

Sunaath,

Thanks for comments. you encouraged me to write more.

Anonymous said...

Bhatre...

Kathegalu chennagide..
Budhana kathe vodi... nanage edu nenapayithu....(Taranga dalli vodida nenapu...)

"Kalpaneyali leenavagi kavanagalanu barede.....
Vastavadali echethu barediddannella haride !"

Keep up the good work..

Bala.

ಶಾಂತಲಾ ಭಂಡಿ (ಸನ್ನಿಧಿ) said...

urbhat ಅವರೆ...
ಕಥೆಗಳು ಇಷ್ಟವಾದ್ವು. ಮೊದಲನೆ ಕಥೆ ಓದಿ ಹೆಗಲು ಮುಟ್ಟಿನೋಡ್ಕೊಳೋ ಪರಿಸ್ಥಿತಿ ಬಂತು. :-)
‘ಮಳೆ ನಿಂತು ಹೋದಮೇಲೆ’ ಬದಲಿಗೆ ‘ಎಲ್ಲರ ಮನೆ ದೋಸೆನೂ’ ಅಂತಾಗಬೇಕಿತ್ತಾ ಅಂತ!! :-)

ಎರಡು ಮತ್ತು ಮೂರನೆಯ ಕಥೆಗಳು ಯೋಚನೆಗೆ ಹಚ್ಚುತ್ತವೆ. ಗಂಭೀರವಾಗಿ ಯೋಚಿಸುವಂತಿವೆ.

urbhat [Raj] said...

ಬಾಲ,
ನಿಮ್ಮ ಕಾಮೆಂಟ್, ಪ್ರೋತ್ಸಾಹಕ್ಕೆ ಧನ್ಯವಾದಗಳು...
ನೀವು ನೆನಪಿಸಿಕೊಂಡ ಆ ಕವನನೂ ಸೂಪರಾಗಿದೆ.

ನೆನಪು ಕನಸುಗಳ ಶಾಂತಲರವರೇ,
ನೀವು ಬ್ಲಾಗ್ ಓದಿ ಕಾಮೆಂಟಿಸಿದ್ದಕ್ಕೆ ತುಂಬಾ ಖುಶಿಯಾಯಿತು.

ಬೇಜಾರು ಮಡ್ಕೊಬೇಡಿ...ನಿಮ್ಗೆ ಕಂಪನಿಗೆ...ಇಲ್ಲೊಂದು ಹೆಗಲು ಮುಟ್ಕೊಂಡಿರೊವ್ರ ದೊಡ್ಡ ಸಂಘನೇ ಹುಟ್ಕೊಂಡಿದೆ.

"ಮಳೆ ನಿಂತು ಹೋದ ಮೇಲೆ" ಬರೆಯುವಾಗ ಮನದಲ್ಲಿದ್ದುದು, ಹೊಸತನದ ಜೊಶ್ ಕಳೆದುಕೊಂಡಾಗ ದಾಂಪತ್ಯ ಜೀವನ ಹೇಗಿರಬಹುದೆಂಬ ಕಲ್ಪನೆ....ಅದರೆ ಬ್ಲಾಗಿನಲ್ಲಿ ಕಥೆ ಓದಿದವರೆಲ್ಲಾ ಹೆಗಲು ಮುಟ್ಕೊಂಡಾಗ್ಲೇ ಗೊತ್ತಾಗಿದ್ದು ಅದು "ಎಲ್ಲರ ಮನೆಯ ದೋಸೆ.." ಅಂತ... ಮೊದಲೇ ಗೊತ್ತಿದ್ದರೆ... ಅದನ್ನೇ ಇಡಬಹುದಿತ್ತು.
ಒಟ್ಟಿನಲ್ಲಿ... ನನ್ನ ಬ್ಲಾಗಂಗಳಕ್ಕೆ ಬಂದು ನಿಂತು ಮಾತಾಡಿಸಿದಕ್ಕೆ ಧನ್ಯವಾದಗಳು.

Shubhada said...

ಪುಟ್ಟ ಪುಟ್ಟ ಕಥೆಗಳು ತುಂಬ ಇಷ್ಟವಾದುವು. ಧನ್ಯವಾದ

urbhat [Raj] said...

ಶುಭದಾ,
ನನಗೆ ನಾನು ಬರೆದ ಮೈಕ್ರೊ ಕತೆಗಳಿಗಿಂತಲೂ ನೀವು ಬರೆದ "ಪುಟ್ಟ ಪುಟ್ಟ" ಕಾಮೆಂಟೇ ಇಷ್ಟವಾಯಿತು...:-)
ಧನ್ಯವಾದಗಳು..ನಿಮಗೂ ಕೂಡ...

Prashant Toragal said...

reee.. bhatre,
Neevu mathu nimma anubhava .. anisike mechuvanthahudu. Bhalee..!

Sudha Bhat said...

nimma male nintu hoda meletumba chennagide,naijavaguide, adare onde kadeyinda baredideeri, innondu kadenuandare gandana sideindanubareebekittu,