ಬದಲಾವಣೆಯೊಂದೇ ಶಾಶ್ವತ! ಹೌದು, ಎಷ್ಟೊಂದು ಬದಲಾಗಿದ್ದೇನೆ..??
ಸ್ವ-ಇಚ್ಚೆಯಿಂದ ನಿರ್ಧರಿಸಿ ಬದಲಾದದ್ದಲ್ಲ. ವಾಸ್ತವದ ಅನಿವಾರ್ಯತೆಗೆ ಸಿಲುಕಿ ಸುರುವಾದದ್ದು.....ಕೊನೆಯಿಲ್ಲವೇನೋ ಅನ್ನುವಷ್ಟರ ಮಟ್ಟಕ್ಕೆ ಕೊಂಡೊಯ್ದಿದೆ ಈ "ಅದು" ನನ್ನನ್ನು. ಈಗ "ಅದರ" ಸಹವಾಸ ಬಿಟ್ಟಿರಲಾರದಷ್ಟು ಒಗ್ಗಿಕೊಂಡಿದ್ದೇನೆ. "...ಇವತ್ತು ಒಂದು ದಿನವಾದರೂ ’ಅದನ್ನು’ ಮುಟ್ಟುವುದಿಲ್ಲ...." ಅಂತ ಅದೆಷ್ಟೋ ಸಲ ಅಂದುಕೊಂಡು, ಅದಕ್ಕೆ ಅತಿಯಾಗಿ ಅಂಟಿಕೊಂಡಿರುವ ಗೀಳನ್ನು ಬಿಡಿಸೋಕ್ಕೆ ಪ್ರಯತ್ನಿಸಿದ್ದೇನೆ. ಆದರೆ ಎಲ್ಲವೂ ವ್ಯರ್ಥ ಪ್ರಯತ್ನ.
"ಅದರ" ಪರಿಚಯ ನನಗಾಗಿದ್ದು ಸುಮಾರು 10 ವರ್ಷಗಳ ಹಿಂದೆ ಮೈಸೂರಿನಲ್ಲಿ. ಆಗ ನಾನು ಹಾಸ್ಟೇಲಿನಲ್ಲಿದ್ದು ಕಾಲೇಜು ಓದುತ್ತಿದ್ದೆ. ಮೊದಲ ಬಾರಿಗೆ "ಅದರ" ರುಚಿ ನೋಡಿದ ನಾನು ಇದು ನನ್ನಂಥವರಿಗಲ್ಲ ಅಂತ ಸುಮ್ಮನಾಗಿದ್ದೆ. ಆದರೆ ಕೆಲವು ಒಳ್ಳೆಯ ಗೆಳೆಯರು ಅದನ್ನು ಹೇಗೆ ಬಳಸುವುದು ಅಂತ ನನಗೆ ಹಂತ ಹಂತವಾಗಿ ಹೇಳಿಕೊಟ್ಟರು. ಕ್ರಮೇಣ "ಅದನ್ನ" ಬಳಸುವುದನ್ನು ನಾನು ರೂಡಿಸಿಕೊಂಡೆ. ಮೊದಮೊದಲು ಕಷ್ಟವೆನಿಸಿದರೂ ನಿಧಾನವಾಗಿ "ಅದು" ನನಗೆ ಅಭ್ಯಾಸವಾಯಿತು.
ಕಾಲೇಜು ಮುಗೀತು.. ಸರಿ ಇನ್ನೇನು... ನನ್ನ ದಾರಿ ನಾನು ಹಿಡಿಯೋಣ... "ಅದರ" ಸಹವಾಸ ನನಗೆ ಬೇಡ ಅಂದುಕೊಂಡೆ. ಆದರೆ ವಿಧಿಯ ಸಂಕಲ್ಪವೇನೋ ಎಂಬಂತೆ ನನ್ನ ಉದ್ಯೋಗದ ವಾತಾವರಣದಲ್ಲಿ "ಅದರ" ಪ್ರಭಾವ ಹೆಚ್ಚಾಗಿತ್ತು. ನಾನು "ಅದರಿಂದ" ದೂರವಿರಬೇಕೆಂದು ಕೊಂಡಷ್ಟೂ "ಅದು" ನನಗೆ ಹತ್ತಿರವಾಗತೊಡಗಿತು. ಕೊನೆಗೆ "ಅದನ್ನ" ಅನಿವಾರ್ಯವಾಗಿ ಒಪ್ಪಿಕೊಂಡೆ. ಉದ್ಯೋಗಕ್ಕೆಂದು ನಾನು ಹೋದ ಚೆನ್ನೈ, ಹೈದ್ರಾಬಾದ್, ಬೆಂಗಳೂರು ಏಲ್ಲೆಡೆಯೂ ಇತಿ ಮಿತಿಯಲ್ಲಿ "ಅದನ್ನು" ಬಳಸುತಿದ್ದೆ.
ಈ ಇತಿ ಮಿತಿಗಳೆಲ್ಲಾ ಕಡಿವಾಣ ತಪ್ಪಿ ಗಾಳಿಪಟವಾದದ್ದು ನಾನು 2 ವರ್ಷಗಳ ಹಿಂದೆ ಅಮೇರಿಕಾಗೆ ಬಂದ ಮೇಲೆ. ನನ್ನ ಆತ್ಮೀಯ ಗೆಳೆಯರೆಲ್ಲರನ್ನೂ ಅಗಲಿ ದೂರದ ಊರಾದ ಅಮೇರಿಕಾಗೆ ಒಂಟಿಯಾಗಿ ಬಂದಾಗ "ಅದುವೇ" ನನ್ನ ಒಡನಾಡಿಯಾಯಿತು. ಮನೆಯ ನೆನಪು ಕಾಡಿ ಬೇಸರವಾದಾಗಲೆಲ್ಲಾ ನಾನು "ಅದರ" ದಾಸನಾಗಿ ಕೂತು ಬಿಡುತ್ತಿದ್ದೆ. ದಿನಕಳೆದಂತೆಲ್ಲಾ "ಅದನ್ನ" ಏಷ್ಟು ಹಚ್ಚಿಕೊಂಡಿದ್ದೆನೆಂದರೇ ನನಗೇ ನಂಬಲಿಕ್ಕಾಗುವುದಿಲ್ಲ. ಅಮೇರಿಕಾಗೆ ಬಂದ ಮೊದಲಲ್ಲೆಲ್ಲಾ ಲಂಚ್ ಬ್ರೆಕ್ನ ಒಂದು ಗಂಟೆಗಳ ಅವಧಿಯಲ್ಲಿ ಮನೆಗೆ ಬಂದು 20 ನಿಮಿಷಗಳಲ್ಲಿ ಊಟ ಮುಗಿಸಿ, ಉಳಿದ 20 ನಿಮಿಷ ಸಮಯದಲ್ಲಿ ಅಲಾರಮು ಇಟ್ಟುಕೊಂಡು ಸಣ್ಣದೊಂದು ನ್ಯಾಪ್ ಮುಗಿಸಿ ಏದ್ದು ಆಫೀಸಿಗೆ ಹೋಗುವ ಒಳ್ಳೆಯ ಪರಿಪಾಟ ಇಟ್ಟುಕೊಂಡಿದ್ದೆ. ಈಗ ನ್ಯಾಪ್ ಬಿಡಿ... ಊಟಕ್ಕೂ ಸಮಯವಿಲ್ಲ. ಊಟಕ್ಕೆ ಮನೆಗೆ ಬಂದಾಗಲೂ ನನಗೆ "ಅದು" ಬೇಕು. ಕೆಲವೊಂದು ಸಲ ಊಟ ಮತ್ತು "ಅದು" ಜೊತೆಜೊತೆಗೆ ಆಗುತಿತ್ತು. ಒಟ್ಟಿನಲ್ಲಿ ಆಫೀಸು, ಮನೆ ಏಲ್ಲೆಡೆಯಲ್ಲಿಯೂ "ಅದರದ್ದೇ" ಅಟ್ಟಹಾಸ. ನಿದ್ರೆ, ನಿತ್ಯಕರ್ಮಗಳ ಸಮಯದ ಹೊರತಾಗಿ ಸದಾ ನಾನು "ಅದರ" ವ್ಯಸನಿ.
ಬಿಟ್ಟುಬಿಡಲಾಗದ, ಇಟ್ಟುಕೊಳ್ಳಲೂ ಆಗದ ಈ ನನ್ನ ಹವ್ಯಾಸವನ್ನು ಯಾರೊಡನೆಯಾದರೂ ಹೇಳಿ ಪರಿಹಾರ ಕಂಡುಕೊಳ್ಳೊಣವೆಂದು ಒಂದು ದಿನ ಆಫೀಸಿನಲ್ಲಿ ನನ್ನ ಪಕ್ಕದಲ್ಲಿ ಕೂರುವ ಸಹೋದ್ಯೋಗಿ ಬಳಿ ಹೇಳಿಕೊಂಡೆ. ಪರಿಹಾರ ಸಿಗೋದು ಬಿಡಿ... ನಾನೇ ಅವರಿಗೆ ಸಮಾಧಾನ ಹೇಳಬೇಕಾಗಿ ಬಂತು. ಅವರ ಸಹನೆಯ ಕಟ್ಟೆಯೊಡೆದಿತ್ತು. ಯಾಕೆಂದರೆ ಅವರ ಸಮಸ್ಯೆ ನನಗಿಂತಲೂ ಗಂಭೀರವಾಗಿತ್ತು. ಅವರಿಗೆ ರಾತ್ರಿ ಅರೆನಿದ್ರೆಯಲ್ಲಿ ಏಚ್ಚರವಾದಗಲೂ ಎದ್ದು "ಅದನ್ನು" ಬಳಸುವ ಹವ್ಯಾಸವಿತ್ತು. 'ಕಳ್ಳನಿಗೆ ಕಳ್ಳನೇ ಮಿತ್ರ' ಅನ್ನುವ ಗಾದೆ ಮಾತಿನ ಹಾಗೆ "ಅದರ" ಮಾಯೆಗೆ ನನ್ನಂತೆಯೆ ಸಿಲುಕಿದ ಇತರರು ನನಗೀಗ ಸ್ನೇಹಿತರಾಗುತ್ತಿದ್ದಾರೆ. ಇತ್ತೀಚೆಗೆ "ಅದಕ್ಕೆ" ಮಾರುಹೋದವರ ದೊಡ್ಡದೊಂದು ನೆಟ್ವರ್ಕ್ಕೇ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ "ಅದು" ನನ್ನ ಬದುಕಿನ ಅವಿಭಾಜ್ಯ ಅಂಗವಾಗುತ್ತಿದೆ ಅಂದರೂ ತಪ್ಪಿಲ್ಲ.
ಮೊನ್ನೆ ಡಿಸೆಂಬರ್ನಲ್ಲಿ ರಜೆಗೆಂದು ಇಂಡಿಯಾಗೆ ಹೋಗಿದ್ದೆ. ಅಮೇರಿಕಾದಲ್ಲಿ "ಅದಕ್ಕೆ" ವಿಪರೀತವಾಗಿ ಅಂಟಿಕೊಂಡಿದ್ದ ನನಗೆ ಈಗ "ಅದನ್ನು" ಬಿಟ್ಟು ಇರಲಾಗುತ್ತಿರಲಿಲ್ಲ. ಉಡುಪಿಗೆ ಹತ್ತಿರದ ನನ್ನ ಹಳ್ಳಿಯ ಮನೆಯಲ್ಲಿ "ಅದನ್ನು" ಬಳಸಲು ಅವಕಾಶ ಇರಲಿಲ್ಲ. ಏನಾದರೊಂದು ನೆಪದಲ್ಲಿ ಕೆಲವೊಮ್ಮೆ ಉಡುಪಿಗೆ ಬಂದು "ಅದನ್ನು" ಬಳಸುತ್ತಿದ್ದೆ. ಈಗ ಭಾರತದ ಸಿಟಿಗಳಲ್ಲಿ "ಅದನ್ನು" ಬಳಸುವುದಕ್ಕಾಗೇ ವ್ಯವಸ್ಥಿತ ಜಾಗಗಳು ಹುಟ್ಟಿಕೊಂಡಿವೆ. ಕಾಲೇಜು ಹುಡುಗ ಹುಡುಗಿಯರಲ್ಲಿ "ಅದನ್ನು" ಬಳಸುವ ಚಾಳಿ ಬಹಳವಾಗಿ ಕಾಣುತ್ತಿದೆ. ಕಾಲೇಜಿನವರನ್ನು ಬಿಡಿ.. ಈಗೀಗ ಹದಿಹರೆಯದವರೂ ಕೈಯಾಡಿಸುತ್ತಿದ್ದಾರೆ. ಮಕ್ಕಳು ಮೈದಾನದಲ್ಲಿ ಆಟವಾಡುವುದನ್ನೂ ಮರೆತು "ಅದರ" ದಾಸರಾಗಿದ್ದಾರೆ.
"ಅದನ್ನು" ಅತಿಯಾಗಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ, ಅನುಭವಿಸಿದ್ದೇನೆ. ಕೆಲವೊಮ್ಮೆ "ಅದರ" ಸತತ ಬಳಕೆಯಿಂದ ನನ್ನ ಕಣ್ಣುಗಳು ಕೆಂಪಾಗುತ್ತವೆ.. ಕಣ್ಣಂಚಿನಲ್ಲಿ ನೀರು ಬರುತ್ತದೆ... ಬೆರಳು, ಮಣಿಗಂಟುಗಳಲ್ಲಿ ಆಗ್ಗಾಗ್ಗೆ ನೋವು ಕಾಣಿಸಿಕೊಳ್ಳುತ್ತದೆ. ಬಿ.ಪಿ.ಯಲ್ಲಿ ಏರುಪೇರಾಗುತ್ತಿದೆ. ಮುಂಚಿನ ಹಾಗೆ ಪೆನ್ನು ಹಿಡಿದು ಹಾಳೆಯಲ್ಲಿ ಬರೆಯಲು ಆಗುತ್ತಿಲ್ಲ...
ಛೆ! ಬದುಕು ಎಷ್ಟೊಂದು ಬದಲಾಗಿದೆ.
"ಅದರ" ಗುಂಗಿನಿಂದ ವಾಪಸು ಬರೋದು ಸಾದ್ಯವಾ..? ಕಷ್ಟ. ಏಕೆಂದರೆ ನಾನೊಬ್ಬನೇ ಅಲ್ಲ.... ಈ ಜಗತ್ತೇ "ಅದನ್ನು" ಅವಲಂಬಿಸಿ ವಾಪಸು ಬರಲು ಆಗದಷ್ಟು ಮುಂದೆ ಹೋಗಿದೆ.
10 comments:
ರಾಜ, ಬರಹ ತುಂಬಾ ಚೆನ್ನಾಗಿ ಬಂದಿದೆ. ಕೊನೆಯ ವಾಕ್ಯ ತೆಗೆದು ಬಿಡು. "ಅದು" ಏನು ಅಂತ ಗೊತ್ತಾಗಿಯೇ ಗೊತ್ತಾಗುವಾಗ, ಅದನ್ನು ಪುನಃ ಹೇಳುವ ಅಗತ್ಯ ಇಲ್ಲ.
@suptadeepthi
ಓಕೆ. ಅದನ್ನು ತೆಗೆದಿದ್ದೇನೆ. ಥಾಂಕ್ಸ್ ..
Kaalakke takkanthe nadeyabeku tamma..u shd accept technology advance. anyways good writing.
ಪ್ರದೀಪ್, ಇಲ್ಲಿ ನಾನು ದ್ವೇಷಿಸುತ್ತಿರುವುದು ಕಂಪ್ಯೂಟರನ್ನಲ್ಲ, ಅದಕ್ಕೆ ಅತಿಯಾಗಿ ಅಂಟಿಕೊಂಡಿರುವ ಹವ್ಯಾಸವನ್ನು. ಪ್ರತಿಕ್ರಿಯೆಗೆ ಧನ್ಯವಾದಗಳು.
Fundoo ley neenu....
Fondulake fundoo guy bhatta kano neenu....
Rajanna.... tumba chennagi bandide baraha. beligge bahala urgentinalli odiddu. eega aaramaagi kootu odidaaga adara hindiruva geelu artha aagtha ide.
That was too good keep it up.We expect more like this from you.
reee.. sakathaaagide. abhayankara idira neevu....!!
Bhat: Though I read your article twice, I was in the wrong impression about the topic. In spite of your clue again I read each line carefully but could not even guess what you referred as “Adu” until I saw someone’s comment. I like your way of writing which not only “mislead my thinking” but also not reveled the subject. Also surprised as some people did guessed it right!!!!!
loo bhatta, "ada"kke helodu doddoru, chatave chatuvatikeya moola aantha. Btw, yen madtha irthiya computernalli asht hottu?
Jayateertha
Post a Comment